ಮಿತಿಗಳಿಗೆ ಸವಾಲು ಒಡ್ಡಿ ಮುನ್ನಡೆಯಬೇಕಾಗಿದೆ.

Thumbnail

ಮಿತಿಗಳಿಗೆ ಸವಾಲು ಒಡ್ಡಿ ಮುನ್ನಡೆಯಬೇಕಾಗಿದೆ.

 

‘ಅಟ್ಟುಣದೆ ಅಡುಗೆಯಿಲ್ಲ, ಬೆವರಿಳಿಸದೆ ಬಟ್ಟೆಗಿಲ್ಲ, ಕಣ್ಣುರಿಸದೆ ವಿದ್ಯೆ ಇಲ್ಲ’ ಎನ್ನುವ ಮಾತಿದೆ. ಇದು ನಮ್ಮ ಉದ್ದೇಶಿತ  ಗುರಿ ತಲುಪಲು ನಾವು ಮಾಡಲೇಬೇಕಾದ ಕೆಲಸದ ಮಹತ್ವವನ್ನು ತಿಳಿಸುತ್ತದೆ. ಇಂದಿನ ಈ ಸಂಧಿಗ್ದ ಕಾಲದಲ್ಲಿ ವಿವಿಧ ಸವಾಲುಗಳನ್ನು ಎದುರಿಸ್ತುತ್ತಿರುವ ಜನತೆ, ವಿಶೇಷವಾಗಿ ಯುವ ಜನತೆ ಸವಾಲುಗಳಿಗೆ ಅಂಜದೆ, ನಮ್ಮ ಮಿತಿಗಳಿಗೆ ಸವಾಲು ಒಡ್ಡಿ ಮುನ್ನಡೆಯಬೇಕಾಗಿದೆ.

ಇಂದು ವಿಶ್ವದಾದ್ಯಂತ COVID-19 ಹರಡುವ ಬಗ್ಗೆ ಟೆಲಿವಿಷನ್, ಸೋಷಿಯಲ್ ಮೀಡಿಯಾ, ಪತ್ರಿಕೆಗಳು, ಕುಟುಂಬ ಮತ್ತು ಸ್ನೇಹಿತರು ಮತ್ತು ಇತರ ಮೂಲಗಳ ಮೂಲಕ ನಾವು ಕೇಳುವ ವಿಷಯವು ನಮ್ಮೆಲ್ಲರನ್ನು ಆತಂಕಕ್ಕೊಳಗಾಗಿಸುತ್ತದೆ, ಭಯಭೀತರನ್ನಾಗಿ ಮಾಡುತ್ತದೆ ಮತ್ತು ಸಾಮಾನ್ಯ ಸಂದರ್ಭಗಳಲ್ಲಿ ನಾವು ಸೂಕ್ತವೆಂದು ಪರಿಗಣಿಸದಂತಹ ವಿಷಯಗಳನ್ನು ಯೋಚಿಸಲು, ಹೇಳಲು ಅಥವಾ ಮಾಡಲು ಸಹ ಕಾರಣವಾಗಬಹುದು

ಈ ಸಂದರ್ಭದಲ್ಲಿ ನಮ್ಮಿಂದ ಏನು ಸಾಧ್ಯವಿಲ್ಲವೆಂದು ಯೋಚಿಸಿ ಹತಾಶರಾಗಿ ಕೂರುವ ಬದಲು ಏನು ಸಾಧ್ಯವಿದೆ ಎಂದು ತಿಳಿದುಕೊಂಡು ಮುನ್ನಡೆದಾಗ ಅವಕಾಶಗಳು ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ಕಂಡು ಬಂದ  ಆವಿಷ್ಕಾರಗಳು, ಸ್ಟಾರ್ಟ್ ಅಪ್ ಗಳು,  ಇತ್ಯಾದಿ  ಇದೆಕ್ಕೆ ನಿದರ್ಶನ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವಿಧ್ಯಾರ್ಥಿ   ಓರ್ವನ  ಸಾಧನೆಯನ್ನು ನಾವು ಇಲ್ಲಿ ಉಲ್ಲೇಖಿಸಬಹುದು. ಅತ ತನ್ನ ದಿನನಿತ್ಯದ ಒನ್ ಲೈನ್  ತರಗತಿಗಳ ಬಳಿಕ ತ್ಯಾಜ್ಯ ವಸ್ತುಗಳಿಂದ ಆಟಿಕೆಗಳನ್ನು ತಯಾರಿಸುತ್ತಿದ್ದು ಸಂಪಾದನೆ ಹಾಗೂ ಅವಕಾಶದ ಸದುಪಯೋಗವನ್ನು ಮಾಡುತ್ತಿದ್ದಾನೆ. ಇಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಮ್ಮ ಆತ್ಮ ಧೈರ್ಯ ಹೆಚ್ಚುತ್ತದೆ.

ಇಂದು ನಾವು , ಮನಸ್ಸನ್ನು ದನಾತ್ಮಕವಾಗಿರಿಸಲು ಮತ್ತು ಹರ್ಷಚಿತ್ತದಿಂದ ಇರಲು  

• ಸದಾ ವಾಸ್ತವದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ, ಕಾರ್ಯನಿರತವಾಗಿ ನಿಯಮಿತವಾಗಿ  ಮನೆಯ ಕೆಲಸಗಳಲ್ಲಿ ನಮ್ಮನ್ನು  ತೊಡಗಿಸಿಕೊಳ್ಳಬೇಕು

 

• ಸಂಗೀತವನ್ನು ಕೇಳುವುದು, ಉತ್ತಮ ಪುಸ್ತಕಗಳನ್ನು  ಓದುವುದು, ದೂರದರ್ಶನದಲ್ಲಿ ಮನರಂಜನಾ ಕಾರ್ಯಕ್ರಮವನ್ನು ನೋಡುವ ಮೂಲಕ; ಚಿತ್ರಕಲೆ, ತೋಟಗಾರಿಕೆ ಅಥವಾ ಹೊಲಿಗೆ ಮುಂತಾದ  ಹವ್ಯಾಸಗಳ ಮೂಲಕ ನಕಾರಾತ್ಮಕ ಭಾವನೆಗಳಿಂದ  ದೂರವಿರಬಹುದು;

• ದೈಹಿಕವಾಗಿ ಸದೃಡವಾಗಿರಲು, ಸಕ್ರಿಯರಾಗಿ  ಸರಳ ಒಳಾಂಗಣ ವ್ಯಾಯಾಮಗಳನ್ನು ಮಾಡಬೇಕು   

• ಜವಾಬ್ದಾರಿಯುತ ಭಾವನೆ ಮೂಡಿಸಿಕೊಂಡು ಅಭಿವ್ರದ್ಧಿಯುತವಾದ ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಬೇಕು.

 

 

ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸಲು

 

• ಆತಂಕದ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ನಿದಾನವಾಗಿ ಉಸಿರಾಡಲು (ಯೋಗ ಪ್ರಾಣಾಯಾಮ) ಅಭ್ಯಾಸ   ಮಾಡುವುದು  ಉತ್ತಮ

 

• ಕೋಪ ಕಿರಿಕಿರಿಯನ್ನು ಅನುಭವಿಸಿದಾಗ ಗಮನವನ್ನು ಬೇರೆಡೆಗೆ ಹರಿಸುವುದು ಸಹಾಯಕ

 

• ಭಯ, ಮಾನಸಿಕ ತುಮುಲವುಂಟಾದಾಗ ಸಕಾರತ್ಮಕವಾಗಿರಲು ಕುಟುಂಬದ ಸದಸ್ಯರೊಡನೆ  ಹಾಗೂ ಸ್ನೆಹಿತರೊಡನೆ ಸಂವಹನ ಮಾಡುವುದು ಸಹಾಯಕ

 

• ಒಂಟಿತನ ಅಥವಾ ದುಃಖದ ಭಾವನೆಗಳಿಂದ ಹೊರಬರಲು ಅಥವಾ ಯಾವುದೇ ಭಾವನೆಗಳು ಹಲವಾರು ದಿನಗಳವರೆಗೆ ನಿರಂತರವಾಗಿ ಮುಂದುವರೆದು, ಪ್ರಯತ್ನಿಸಿದರೂ ಹೊರಬರಲು ಆಗದಿರುವ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರ ಸಹಾಯ ಅವಶ್ಯಕ.

 

ಒಟ್ಟಿನಲ್ಲಿ ಹೇಳುವುದಾದರೆ ಒಂಟಿಯೆಂದು ನೋಯದೆ ಹೊಸ ಹಸಿರು ಇಹುದು ಎಂಬ ಸಕಾರತ್ಮಕ ಭಾವನೆ ಬೆಳೆಸಿ ಸವಾಲುಗಳಿಗೆ ಅಂಜದೆ, ನಮ್ಮ ಮಿತಿಗಳಿಗೆ ಸವಾಲು ಒಡ್ಡಿ ಮುನ್ನಡೆಯುವುದು,  ನಮ್ಮ ಹಾದಿಯನ್ನು  ಸುಗಮವಾಗಿಸಲು ಸಹಾಯಕ.

ನೆನಪಿಡಿ: ಕಷ್ಟದ ಸಮಯದಲ್ಲಿ ಉತ್ತಮ ಮಾನಸಿಕ ಸ್ಥಿತಿ ಹೊಂದಿದಲ್ಲಿ ಸವಾಲುಗಳನ್ನು ಹೆಚ್ಚು ಸುಲಭವಾಗಿ ಎದುರಿಸಬಹುದು!!!!