ಸೋಲು ಉಚಿತ ಸಾವು ಖಚಿತ "

Thumbnail

ಸೋಲು ಉಚಿತ ಸಾವು ಖಚಿತ " 
"ಸೋಲು ಉಚಿತ ಸಾವು ಖಚಿತ " ಇದೊಂದು ನಾಣ್ಣುಡಿ ಅಷ್ಟೇ, ಅದು ಸುಳಲ್ಲ. ಎಷ್ಟು ಚಂದವಾದ ನುಡಿ ಅಲ್ಲವೇ ಸ್ನೇಹಿತರೆ, ಈ ನಾಣ್ಣುಡಿಯಂತೆ ಸೋತವನು ಸಾಯಲೇಬೇಕೇ? ಸಾಯಲೇಬೇಕು ಅಂತ ಏನಿಲ್ಲ. ಸೋಲು ನಮ್ಮ ಪರಿಶ್ರಮ ಅಲ್ಲ, ನಮ್ಮ ಶ್ರಮಕ್ಕೆ ಬೆಲೆ ಇಲ್ಲ ಅಷ್ಟೇ, ಅಂದ ಮೇಲೆ ಅದಕ್ಕೆ ಹೆದರುವ ಅವಶ್ಯಕತೆಯು ಏನಿಲ್ಲ.
 
  ಒಂದು ಇರುವೆ ಕೂಡ ತುಂಬಾ ಶ್ರಮವಹಿಸಿ ಗೂಡು ಕಟ್ಟುತ್ತದೆ, ಅದರ ಶ್ರಮಕ್ಕೆ ಕೆಲವರ ನಿಷ್ಟುರ ಮಾತುಗಳು, ತೊಂದರೆಗಳು ಎದುರಾಗಬಹುದು. ಆದರೂ ಅದು ತನ್ನ ಶ್ರಮ ಬಿಡದೆ ಸತತವಾಗಿ ಪ್ರಯತ್ನಿಸುತ್ತಾ ಇರುತ್ತಾದೆ.  ಯಾಕಂದರೆ ಅದಕೆ ತಿಳಿದಿದೆ  ಸೋಲು ನನ್ನ ಶ್ರಮವಲ್ಲ ಎಂದು,  ಸಾವನ್ನು ಪಕ್ಕಕ್ಕೆ ಸರಿಸಿ ತನ್ನ ಶ್ರಮದ ಕಡೆ ಅದು ಮುನ್ನಡೆಯುತ್ತದೆ.  ಕೊನೆಗೂ ಅದರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ, ಆದರೆ ಸ್ವಲ್ಪ ಸಮಯ ಬೇಕು, ಅಪಾರ ತಾಳ್ಮೆ ಬೇಕು  ಅಷ್ಟೇ ಅದು ತನ್ನ ಸುಂದರ ಅರಮನೆಯಲ್ಲಿ ವಾಸ ಮಾಡುವ ಸಮಯಕ್ಕೆ ಸರಿಯಾಗಿ ಹಾವು ಅದರ ಮನೆಯನ್ನು ತನ್ನ ವಶಕ್ಕೆ ತೆಗದುಕೊಳ್ಳುತ್ತದೆ ಆದರೂ ಆ ಇರುವೆ ತನ್ನ ಕೆಲಸ ನಿಲ್ಲಿಸುವುದಿಲ್ಲ, ಇಂದಿಗೂ ಕೂಡ ಶ್ರಮವಹಿಸಿ ಹೊಸ ಮನೆಯನ್ನು ಕಟ್ಟುತ್ತಾ ಹೋಗುತ್ತದೆ. 
 
 ಹಾಗೆಯೇ ನಮ್ಮ ನಿಮ್ಮ ಜೀವನ ನಿರಂತರ ಪ್ರಯತ್ನ ಹಲವು ಸವಾಲುಗಳು, ಹಲವು ಸೋಲುಗಳು, ಆದರೂ ನಾವು ಶ್ರಮಿಸುತ್ತಾ ಇರಬೇಕು, ಅಂತಿಮ ಯಶಸ್ಸು ನಮ್ಮದಾಗುವುದರಲ್ಲಿ ಸಂಶಯವಿಲ್ಲ. ಏನನ್ನಾದರೂ ಸಾಧಿಸಬೇಕು ಅಂದರೆ   ಕೆಲವೊಂದು ಅಡಚಣೆ, ಅವಮಾನ, ಸಂಘರ್ಷಘಳು ಎದುರಾಗುವುದು ಸಹಜ  ಅವೆಲ್ಲವನ್ನೂ ಮೆಟ್ಟಿ ನಿಂತಾಗಲೇ ನಮ್ಮ ಶ್ರಮಕ್ಕೆ ಬೆಲೆ, ಬೆವರಿಗೆ ತಕ್ಕ ಪ್ರತಿಫಲ ಲಭಿಸುತ್ತದೆ. ಕೆಲವೊಮ್ಮೆ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೊ ಇಲ್ಲವೋ ಗೊತ್ತಿಲ್ಲ ಆದರೂ  ನಮ್ಮ ನೇರ ದೃಷ್ಟಿ ಶ್ರಮದ ಹಿಂದೆಯೇ ಇರಬೇಕು, ಒಂದಂತೂ ಸತ್ಯ ತುಳಿಯುವವರು, ಸೋಲಿಸಲು ಪ್ರಯತ್ನಿಸುವವರು ಇಲ್ಲದೆ ಇದಿದ್ದರೆ  ನಮ್ಮ  ಗೆಲುವಿಗೆ ಶ್ರಮಕ್ಕೆ ಅರ್ಥಾನೇ ಇರುವುದಿಲ್ಲ. 

ಎಲ್ಲರಿಗೂ ಕಾಗೆಯ ಪರಿಚಯ ಉಂಟು ಹಾಗೆಯೇ  ಕೋಗಿಲೆಯ ಪರಿಚಯವೂ ಉಂಟು, ಕೋಗಿಲೆ ಹಾಗೂ ಕಾಗೆಯ ಬಣ್ಣ ಒಂದೇ ಇರಬಹುದು ಆದರೆ ಅವುಗಳ ಅಭಿರುಚಿ ಬೇರೆ ಬೇರೆ, ಜನರು ಸಾಮಾನ್ಯವಾಗಿ ತುಂಬಾ ಪ್ರೀತಿಸೋದು ಕೋಗಿಲೆಯನ್ನೇ ಇಂಪಾದ ದ್ವನಿ ಕೋಗಿಲೆಯದು ಎಂದು, ಅದರ ಧ್ವನಿಗೆ ಎಲ್ಲರೂ ಮಾರುಹೋಗುತ್ತಾರೆ. ಆದರೆ ಕಾಗೆ ಅನಿಷ್ಟ, ಕೆಟ್ಟದ್ದು ಎಂಬುದೇ ಜನರ ನಂಬಿಕೆ, ಅದನ್ನು ದೂರ ಓಡಿಸುತ್ತಾರೆ. ಆದರೆ ಕಾಗೆಗೆ ಅದರದೇ ಕೌಶಲ್ಯ ಉಂಟು ಅದಕ್ಕೆ ಶ್ರಮದ ಅರಿವು ಇದೆ ಸ್ವಲ್ಪ ಪೆದ್ದು ಇರಬಹುದು ಆದರೆ ಮಾನವೀಯತೆ ಮೆರೆಯುತ್ತದೆ. ಅಷ್ಟು ದಿನಗಳವರೆಗೆ ಗೂಡು ಕಟ್ಟಿ ಕಷ್ಟ ಪಟ್ಟ ಕಾಗೆಯ ಗೂಡಿಗೆ ಕೋಗಿಲೆ ತನ್ನ ಮೊಟ್ಟೆ ಇಡುತ್ತದೆ ಆ ಮೊಟ್ಟೆಗಳಿಗೆ ಕಾವು ಕೊಟ್ಟು ಆರೈಕೆ ಮಾಡುವುದು ಈ ನಮ್ಮ ಕಾಗೇನೇ ಇದು ಹಿರಿಯರ ಮಾತು ಜನರ ಮನೆಯ ಮುಂದೆ ಇರುವ ಕೊಳೆ ಶುದ್ಧ ಮಾಡಲು ಓಡಿ ಬರುವುದು ಕಾಗೆಯೇ, ತನಗೆ ದೊರೆತುದನ್ನು ತನ್ನ ಮಿತ್ರರೊಡನೇ ಹಂಚಿಕೊಂಡು ತಿನ್ನುವುದಕ್ಕೆ ಕಾಗೆ ಉತ್ತಮ ಉದಾಹರಣೆ ಕಾಗೆ. ಆದರೆ  ತನ್ನ ಸೇವೆಗೆ, ಸದ್ಗುಣಗಳಿಗೆ ಕಾಗೆ ಯಾರ ಅನುಕಂಪವನ್ನು ಸಹಾಯವನ್ನು ಬೇಡುವುದಿಲ್ಲ ಅನ್ನೋದು ಲೋಕಾರೂಡಿಯಷ್ಟೇ ಸತ್ಯ. 

ಮನುಷ್ಯರಾದ ನಮ್ಮಂತೆ ಎಲ್ಲರೂ ಶ್ರಮದ ಸೋಲಿನ, ವಿಫಲತೆಯ ಕುರಿತು ಆಲೋಚಿಸಿ ಹಿಂದೆ ಉಳಿದಿದ್ದರೆ ಸಾವಿರಾರು ವಿಧ್ವಾಂಸರು, ಕಲಾವಿದರು, ವಿಜ್ಞಾನಿಗಳು, ಸಂಶೋಧಕರು ಯಶಸ್ಸಿನ ದಾರಿಗೆ ಬಂದು ಶ್ರೇಷ್ಠ ವ್ಯಕ್ತಿಗಳಾಗುತ್ತಾ ಇರಲಿಲ್ಲ. ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಬೆಳೆದು ಬಂದವರು, ಹಲವು ಸೋಲುಗಳನ್ನು ಕಂಡವರು. ಆ ಸೋಲುಗಳ ಬಲದಿಂದಲೇ ನಮಗೆಲ್ಲರಿಗೂ ಅಂತಿಮ ಜಯ ಒದಗಿಸಿದವರು. ಳು ಕಾಣುತಾರೆ, ಇವರೆಲ್ಲ ಸೋಲಿನ ಮೆಟ್ಟಿಲುಗಳನ್ನೇ ಆದರಿಸುತ ಬಂದವರು, ಅದೇ ರೀತಿ ಸರ್ ಎಂ ವಿಶ್ವೇಶ್ವರಯ್ಯ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಬಿ ಆರ್ ಅಂಬೇಡ್ಕರ್ ಮುಂತಾದ ಸಾವಿರಾರು ನಾಯಕರು, ತೊಮಸ್ ಆಲ್ವಾ ಎಡಿಸನ್, ಆಲ್ಬರ್ಟ್ ಐನ್್ಸ್ಟೈನ್ ಮುಂತಾದ ಸಂಶೋಧಕರು ತಮ್ಮ ಸೋಲನ್ನೇ ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿಕೊಂಡರು. ಅಂತಿಮವಾಗಿ ಅವರು  ಜಯದ ಭಾವುಟ ಹಾರಿಸಿದ್ದಾರೆ. ಎಂದಾದರೆ ಅದಕ್ಕೆ ಕಾರಣ ಅವರು ಸೋಲಿಗೆ ಹೆದರದೆ, ಹಿಂಜರಿಯದೆ ಇರುವುದು.  ಎಲ್ಲದಕ್ಕಿಂತ ಹೆಚ್ಚಾಗಿ ಅವರಲ್ಲಿ ತಮ್ಮ ಕುರಿತು ಇದ್ದ ಅಚಲವಾದ ನಂಬಿಕೆ, ಶ್ರಮದ ಅನಿವಾರ್ಯತೆಯ ಅರಿವು ಹಾಗೂ ಸ್ವಾಭಿಮಾನ ಅವರನ್ನು ಯಶಸ್ವಿಯಾಗಿಸಿತು ಎನ್ನಬಹುದು.  
 
ಒಂದು ನೆನಪಿಟ್ಟುಕೊಳ್ಳಿ ಯಾರೆಲ್ಲ ಇಂದು ನಾನು ಪರೀಕ್ಷೆಯಲ್ಲಿ ಸೋತಿರುವೆ, ಕೆಲಸದಲ್ಲಿ ಸೋತಿರುವೆ, ಪ್ರೀತಿಯಲ್ಲಿ ಸೋತಿರುವೆ ಎಂದು ಸೋಲಿನ ಭಾವನೆಗಳಿಂದ ತುಂಬಿ ಸಾವಿಗೆ ಶರಣಾಗುವ ಆಲೋಚನೆ ಮಾಡುತ್ತಿದ್ದೀರೋ  ನಿಮಗೆ ಇದು ತಿಳಿದಿರಲಿ, ಅಂದು ಆ  ದಿನ ಆ ಮಹಾನ್ ವ್ಯಕ್ತಿಗಳು ನಿಮ್ಮ ಹಾಗೆಯೇ ಸೋತೆ ಎಂದು ಕೈ ಚೆಲ್ಲಿ ಕುಳಿತಿದ್ದರೆ, ಈ ದಿನ ನಾವು ಇಷ್ಟೊಂದು ಖುಷಿಯಾಗಿ ನೆಮ್ಮದಿಯಾಗಿ ಇರಲು ಆಗುತಿರಲಿಲ್ಲ ಇದಕೆಲ್ಲ ಕಾರಣ ಸೋತು ಗೆದ್ದಿರುವ ಆ ಮಹಾನ್ ಚೇತನಗಳು. ನಾವು ಕೂಡಾ ಅವರಂತೆ ಸೋತ ಎಲ್ಲಾ ಸಂದರ್ಭಗಳಲ್ಲಿ ಎದ್ದು ನಿಲ್ಲಲು ಕಲಿಯುವುದು ಅನಿವಾರ್ಯ. 

ಸೋಲು ಕಂಡಾಗ ದುಃಖಿಸಬೇಡ ಮನಸಿಗೆ ನೆಮ್ಮದಿ ಶಾಂತಿ ಹುಡುಕು ಇನ್ನೊಬ್ಬರ  ಕಟು ಮಾತಿಗೆ ನಸು ನಕ್ಕು ಮುನ್ನಡೆ,  ನಿನ್ನನ್ನು ಅರ್ಥಮಾಡಿಕೊಳ್ಳುವ ಉತ್ತಮ ಮಿತ್ರರೊಡನೆ ಚರ್ಚಿಸು, ಹಿರಿಯರ ಬುದ್ಧಿ ಮಾತುಗಳನ್ನು ಕೇಳು, ನಿನ್ನ ನೋವಿಗೆ ಸಾವಿರ ಜನರ ಹಿತನುಡಿ ಕೇಳು, ಸಿಗದೆ ಇದ್ದರೆ ಪುಸ್ತಕಗಳನ್ನ ಆಲಂಗಿಸು ಆಗಲೂ ನೆಮ್ಮದಿ ದೊರಕಲಿಲ್ಲವೇ? ನಿನ್ನ ನೋವನ್ನು ಒಂದು ಪುಸ್ತಕದಲ್ಲಿ ಬರೆದುಕೋ ಅದು ನಿನ್ನನ್ನು ಅತಿ ಎತ್ತರಕ್ಕೆ ಕರೆದೊಯ್ಯಬಹುದು  ನಮ್ಮ ಸಾಧನೆ ಸಾಯಿಸುವ ಮಾನವ ಯಾರೂ ಇಲ್ಲ , ಮುಂದೆ ಒಳ್ಳಯದಾಗುತ್ತದೆ ಎಂಬ ದ್ರಢ ಭರವಸೆ ಇರಲಿ. ನಾಳೆಯನ್ನು ಅರಿತುಕೊಂಡವರು  ಯಾರು ಅಲ್ಲವೇ?,