ಬದುಕು
ಬದುಕು
‘ಯದ್ಭಾವಂ ತದ್ಭವತಿ’ ನಾವು ಏನನ್ನು ಆಲೋಚಿಸುತ್ತೇವೆಯೋ ಹಾಗೇ ಬದುಕನ್ನು ರೂಪಿಸಿಕೊಳ್ಳುತ್ತೇವೆ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಜೀವನದಲ್ಲಿ ಬರುವ ದುಃಖ, ನೋವು, ಸಂಕಷ್ಟಗಳು ಯಾವುವೂ ಪರಿಹಾರವಿಲ್ಲದ ಸಮಸ್ಯೆಗಳಲ್ಲ. ಪ್ರತಿಯೊಂದು ಕತ್ತಲೆಯ ಕೋಣೆಯಲ್ಲಿ ಬೆಳಕು ಬರಲು ಒಂದು ಕಿಟಕಿಯಿದ್ದೇ ಇರುತ್ತದೆ. ಹಾಗೇ ನೋವು ಅಥವಾ ಸಂಕಷ್ಟಗಳನ್ನು ದೂರ ಮಾಡುವಂತಹ ಮಾರ್ಗೋಪಾಯಗಳು ಇದ್ದೇ ಇರುತ್ತದೆ. ತಾಳ್ಮೆಯಿಂದ ಒತ್ತಡವಿಲ್ಲದೆ ಕಾಯಬೇಕಷ್ಟೇ. ಕೊರೋನವೆಂಬ ರೋಗಾಣುವಿನಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಗುರಿಯಾಗಿದೆ. ಈ ಸಂದರ್ಭದಲ್ಲಿ ನಾವು ಚಿತ್ತಕ್ಷೋಭೆಗೆ ಒಳಗಾಗಬಾರದು. ಆರೋಗ್ಯವೇ ಭಾಗ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಸ್ವಶುಚಿತ್ವ, ಪರಿಸರ ಶುಚಿತ್ವದ ಕಡೆಗೆ ಗಮನ ಹರಿಸೋಣ. ಜನಸಂದಣಿ ಇರುವಲ್ಲಿಗೆ ಹೋಗದಿರುವಂತೆ ನಮ್ಮ ಮೇಲೆ ನಾವೇ ನಿರ್ಬಂಧ ಹೇರಿಕೊಳ್ಳೋಣ. ಅತೀ ಅವಶ್ಯವಿದ್ದಾಗ ಮನೆಯಿಂದ ಮಾಸ್ಕ್ ಧರಿಸಿ ಹೊರಬರೋಣ. ಅನಗತ್ಯವಾಗಿ ಮದುವೆ, ಸಾವು, ಇನ್ನಿತರ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳುವ ಮನಸ್ಥಿತಿಗೆ ಬರೋಣ.
ಕೊರೋನಾ ರೋಗ ಒಂದಷ್ಟು ಜೀವಗಳನ್ನು ಬಲಿತೆಗೆದುಕೊಂಡು ಎಲ್ಲರ ಮನಸ್ಸನ್ನು ಘಾಸಿಗೊಳಿಸಿದೆ. ಆರ್ಥಿಕ ಹೊಡೆತವನ್ನು ನೀಡಿದೆ. ಜನಸಾಮಾನ್ಯರ ಬದುಕಲ್ಲಿ ಏರುಪೇರಾಗಿದೆ. ಎಲ್ಲವೂ ನಿಜ. ಆದರೆ ಕೊರೋನಾ ಲಾಕ್‍ಡೌನ್‍ನಿಂದ ಆಗಿರುವ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಗಮನಹರಿಸೋಣ. ಮೊದನೆಯದಾಗಿ ಪರಿಸರ ಮಾಲಿನ್ಯ ಕುಂಠಿತವಾಗಿದೆ. ಓಜೋನ್ ಪದರದ ರಂಧ್ರದ ಗಾತ್ರ ಕುಗ್ಗಿದೆ. ವಾಹನ ದಟ್ಟಣೆ ಕಡಿಮೆಯಾಗಿ, ಆಕ್ಸಿಡೆಂಟಿನಿಂದ ಜನರು ಸಾಯುವುದು ಕಡಿಮೆಯಾಗಿದೆ. ಉದ್ಯೋಗಿಗಳು (Iಖಿ-ಃಖಿ) ಮನೆಯಲ್ಲಿಯೇ ತಮ್ಮ ಕುಟುಂಬದೊಂದಿಗೆ ಕಾಲಕಳೆಯುವಂತಾಗಿದೆ. ಹಿಂದಿನ ಕಾಲದಂತೆ, ಮನೆಮಂದಿಯೆಲ್ಲ ಒಟ್ಟಿಗೆ ಮನೆಯಲ್ಲಿಯೇ ಇದ್ದು ಶುಚಿ ರುಚಿಯಾಗಿ ಅಡುಗೆ ಮಾಡಿ, ಊಟ ಮಾಡಿ ಸಂತೋಷದಿಂದ ಆಟವಾಡುತ್ತಾ, ನಗುತ್ತಾ, ನಲಿಯುತ್ತಾ ಇರುವಂತಾಗಿದೆ. ಇದರಿಂದ ಒತ್ತಡ ಕಡಿಮೆಯಾಗಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಕರಕುಶಲ ಕಲೆಗಳಾದ ಕಸೂತಿ, ಉಲ್ಲನ್ ನಿಟ್ಟಿಂಗ್, ಪೇಂಟಿಂಗ್ ಇಂತಹ ಕೌಶಲ್ಯಗಳು ಕ್ರಿಯಾಶೀಲವಾಗಿದೆ. ಮಕ್ಕಳು ಶಾಲೆಯ ಪುಸ್ತಕದ ಹೊರೆಯಿಲ್ಲದೆ ಸಂತೋಷದಿಂದ ಹಕ್ಕಿಗಳಂತೆ ಹಾರಾಡುತ್ತಿದ್ದಾರೆ... ಇದೆಲ್ಲವೂ ಕೊರೋನಾದಿಂದ ಆಗಿರುವ ಸಕಾರಾತ್ಮಕ ಬದಲಾವಣೆಯೆಂದು ಭಾವಿಸೋಣ. ‘ಇveಡಿಥಿ ಛಿಟouಜ hಚಿs ಚಿ siಟveಡಿ ಟiಟಿiಟಿg’, ಪ್ರತಿಯೊಂದು ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆ. ಕೊರೋನದಂತಹ ನೂರಾರು ವೈರಾಣುಗಳು ಭಾರತೀಯರ ರೋಗನಿರೋಧಕ ಶಕ್ತಿಯ ಮುಂದೆ ಏನೇನು ಅಲ್ಲ. ನಮ್ಮ ಮನೆಯಲ್ಲಿಯೇ ಇರುವ ಶುಂಠಿ, ಅರಿಶಿಣ, ಕಾಳುಮೆಣಸು, ಜೀರಿಗೆಯನ್ನು ಬಳಸಿಕೊಂಡು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಂಡು ‘ಕೊರೋನ’ವೆಂಬ ಹೆಮ್ಮಾರಿಯನ್ನು ಸದೆಬಡಿಯಲು ಹೆಡೆಮುರಿಕಟ್ಟೋಣ.
ಅಜ್ಜಿಕುಟ್ಟಿರ.ಸಿ.ಗಿರೀಶ್
ರಿಜಿಸ್ಟ್ರಾರ್