ಆತ್ಮಹತ್ಯೆ 

Thumbnail

ಆತ್ಮಹತ್ಯೆ 

 ಹುಟ್ಟು-ಸಾವು ಎರಡಕ್ಷರ ಜೀವನದ   ಒಂದು ಮೈಲುಗಲ್ಲು ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ. ಜನನದಿಂದ   ಮರಣದೆಡೆಗೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೂ ಕೆಲವೊಮ್ಮೆ ಸುಖ, ಸಂತೋಷ,  ವೈಭೋಗಗಳಿಗೆ ಶಾಶ್ವತವಾಗಿ ನಲೆಸುತ್ತೇವೆ ಎಂಬಂತೆ ಅನ್ಯಾಯ ಅಕ್ರಮಗಳನ್ನು  ಮಾಡುತ್ತಿರುತ್ತೇವೆ. ಕೆಲವೊಮ್ಮೆ ಸಾವು ಆಕಸ್ಮಿಕವಾಗಿರುತ್ತದೆ,  ಕೆಲವೊಮ್ಮೆ ಅನಾರೋಗ್ಯದಿಂದ ಇಂತಿಷ್ಟೇ ನಮ್ಮ ಜೀವನದ ಪಯಣ ಎಂಬುದು ತಿಳಿದಿರುತ್ತದೆ. ಕೆಲವೊಮ್ಮೆ ಗೊತ್ತಿದ್ದೋ  ಗೊತ್ತಿಲ್ಲದೆಯೋ ಜೀವನದ ಬಂಡಿಯನ್ನು ಕೊನೆಗೊಳಿಸುವವರು ನಮ್ಮೊಡನೆ ಇರುತ್ತಾರೆ. ಕ್ಷುಲ್ಲಕ ಕಾರಣಗಳಿರಬಹುದು, ನೊಂದಿರಬಹುದು, ಆಸೆ ಆಕಾಂಕ್ಷೆಗಳು ಈಡೇರದಿರ ಬಹುದು, ಮಾನಸಿಕ ಖಿನ್ನತೆಗಳಿರಬಹುದು, ಭಾವನೆಗಳಿಗೆ ಎದುರೇಟು ಬಿದ್ದಿರಬಹುದು. ಇತ್ಯಾದಿ ಅನೇಕ ಕಾರಣಗಳು ಆತ್ಮಹತ್ಯೆ ಎಂಬುವುದರ ಹಿಂದಿದೆ.                       

    ಆತ್ಮಹತ್ಯೆ ಎಂಬುದು  ಯಾರನ್ನು ತೊರೆದಿಲ್ಲ ವಿದ್ಯಾರ್ಥಿಗಳನ್ನು ,ಯುವ ಜನಾಂಗದವರನ್ನು, ಶಿಕ್ಷಿತರನ್ನು, ಧಾರ್ಮಿಕ ಮುಖಂಡರನ್ನು, ಹೀಗೆ ಯಾವುದೇ ಭೇದ ಭಾವಗಳಿಲ್ಲದೆ ಎಲ್ಲರೂ ಈ ಕಠಿಣ ನಿರ್ಧಾರದ ಮಾಯಾಜಾಲದಲ್ಲಿ ಹೋಗಿರುತ್ತಾರೆ ಹೋಗಿ ಬಂದಿರುತ್ತಾರೆ. ಆತ್ಮಹತ್ಯೆ ಮಹಾಪಾಪ ಎಂಬ ಮಾತಿದೆ. ಧಾರ್ಮಿಕ ಗ್ರಂಥಗಳಲ್ಲಿ ಈ ಮಹಾ ಪಾಪದ  ಉಲ್ಲೇಖಗಳಿವೆ.  ಕ್ಷಮಿಸಲಾರದ ತಪ್ಪು ಎಂಬ ಭಾವನೆಗಳು ಇದರಲ್ಲಿ ತಳೆದಿವೆ ಆತ್ಮಹತ್ಯೆ ಮಾಡಿ ಜೀವ  ಕಳೆದುಕೊಂಡವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಸ್ವರ್ಗದ ಕರೆಯಿಲ್ಲ .ಅವರು  ನರಕಕ್ಕೆ ಸೀಮಿತ ಎಂಬ ಉಲ್ಲೇಖಗಳು ಧರ್ಮಗ್ರಂಥಗಳಲ್ಲಿ  ಇವೆ ಆದರೂ ಯತ್ನಗಳು  ನಡೆಯುತ್ತಲೇ  ಇದೆ.       

 ಆತ್ಮಹತ್ಯೆಗೆ ಕಾರಣಗಳು ಹಲವಾರು ಮಾನಸಿಕವಾಗಿ  ಖಿನ್ನತೆಯಿಂದಿರಬಹುದು, ನೊಂದಿರುದು, ಕೂಡ  ಒಬ್ಬ ವ್ಯಕ್ತಿ ಒಂದೇ ರೀತಿ ವರ್ತಿಸಿವವರು ವಿಭಿನ್ನವಾಗಿ ವರ್ತಿಸಿದಾಗ ವರ್ತನೆಯಲ್ಲಿ ಬದಲಾವಣೆಗಳಾದಾಗ ಏನೋ ಸಮಸ್ಯೆಯಿದೆ ಎಂದು ತಿಳಿದು ಚರ್ಚಿಸಿ ಸರಿ ಮಾಡಬಹುದು ಆದರೆ ಕೆಲವೊಮ್ಮೆ ಅದರ ನಿರ್ಲಕ್ಷವೇ ಅವರ ಅಂತ್ಯಕ್ಕೆ ಕಾರಣವಾಗಬಹುದು. ತಂದೆ-ತಾಯಿ ಸ್ನೇಹಿತರು ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ. ಯಾಕೆಂದರೆ ಸಾಮಾನ್ಯವಾಗಿ ಬಾಂಧವ್ಯದ ವ್ಯಕ್ತಿಗಳಿಗೆ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಸಾಧ್ಯ. ಪ್ರೀತಿ,ಪ್ರೇಮ, ಮೋಸ ಇತ್ಯಾದಿ ವಿಚಾರಗಳು ಎದುರಾದಾಗ ಅವರನ್ನು  ಹೀಯಾಳಿಸುದನ್ನು ಬಿಟ್ಟು ಧೈರ್ಯವನ್ನು ತುಂಬಬೇಕು. ಪ್ರೀತಿಸಿ  ಕೈ ಕೊಟ್ಟಂತಹ ಸಂದರ್ಭದಲ್ಲಿ ಇಂತಹ ಕೃತ್ಯದಲ್ಲಿ ಯುವಜನತೆ ಸಾಮಾನ್ಯವಾಗಿ ಬಲಿಯಾಗುತ್ತಾರೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಒಂಟಿಯಾಗಿರುಲು ಬಯಸುತ್ತಾರೆ. ಆಗ ಇಂತಹ ನಿರ್ಧಾರಕ್ಕೆ ಬರುವುದಿದೆ.ಹಾಗಾಗಿ ಅವರನ್ನು  ಸಂತೈಸಿ, ಧೈರ್ಯ ತುಂಬಿ, ಮೋಸ ಮಾಡಿದವರ ಮುಂದೆ ಬದುಕುವ ಛಲವನ್ನು, ಆತ್ಮವಿಶ್ವಾಸವನ್ನು, ತುಂಬಬೇಕು ಮಾನಸಿಕ ತಜ್ಞರನ್ನು ಭೇಟಿಯಾಗಿಸಿ ಮನಸ್ಸನ್ನು ತಿಳಿಯಾಗಿಸುವಂತೆ ಅವರು ನಿರಾಳವಾಗಿರುವಂತೆ ಮಾಡಬೇಕು. ವಿದ್ಯಾರ್ಥಿಗಳು ಫೇಲ್ ಆದಾಗ, ಕಡಿಮೆ ಅಂಕ ತೆಗೆದಾಗ, ಇಂತಹ ನಿರ್ಧಾರಗಳನ್ನು ಮಾಡುತ್ತಾರೆ ಹೆತ್ತವರು  ಅವರಲ್ಲಿ ಧೈರ್ಯವನ್ನು ತುಂಬಿದಾಗ ಮಾತ್ರ ಅವರನ್ನು ಆ ಭಾವನೆಗಳಿಂದ ಹೊರಬರಲು ಸಾಧ್ಯ,ಹೀಯಾಳಿಸುದು, ಅವಮಾನಿಸುದು ಮಾಡಬಾರದು. 

 

ವಿವಾಹಿತರು ಹೆಚ್ಚಾಗಿ ಪತಿಯ ಹಿಂಸೆ, ವರದಕ್ಷಿಣೆ ಹಿಂಸೆ, ಮನೆಯವರ ಹಿಂಸೆಯಿಂದ  ಈ ರೀತಿಯ ನಿರ್ಧಾರಗಳನ್ನು ತಳೆಯುತ್ತಾರೆ. ಮದುವೆಯಾಗಿ ಬಂದ ಹೆಣ್ಣಿಗೆ ತನ್ನದೇ  ಆಸೆ ಆಕಾಂಕ್ಷೆಗಳಿರುತ್ತವೆ. ತನ್ನ ವಿವಾಹ ಜೀವನ ಹಾಗೆ ಇರಬೇಕು ಹೀಗೆ ಇರಬೇಕೆಂಬ ಆಕಾಂಕ್ಷೆಗಳಿರುತ್ತವೆ. ಆದರೆ ಅವಳ ಅಂದುಕೊಂಡಿದ್ದು ಒಂದು ಹಾಗಿದ್ದು ಒಂದು ಆಗಾಗ ತನ್ನ ಭಾವನೆಗಳಿಗೆ ಏಟು ಬಿದ್ದಾಗ  ಮೌನಿಯಾಗಿ ಬಿಡುತ್ತಾಳೆ.ಆದರೂ ಮನೆಯವರ ಮಾನ ಮರ್ಯಾದೆಗಂಜಿ ಕಾನೂನು ಹೋರಾಟಕ್ಕೆ ಮುಂದೆ ಬರದೇ ಇರಬಹುದು, ಹೆಚ್ಚಾಗಿ ನಮ್ಮ ದೇಶದಲ್ಲಿ ತನ್ನ ತವರು ಮನೆಯಲ್ಲಿ ಹೇಳಿದರೂ ಕೂಡ ರಾಜಿ ಪಂಚಾಯಿತಿ  ಮಾಡಿಬಿಡುತ್ತಾರೆ ಯಾಕೆಂದರೆ ಮಾನ-ಮರ್ಯಾದೆ ದೃಷ್ಟಿಯಿಂದ, ಇನ್ನೂ ವಿವಾಹವಾಗಲು ಇರುವವರ ಮೇಲೆ ಪರಿಣಾಮ ಬೀರಬಹುದು   ಎಂಬುದು ಕೊಟ್ಟ  ಹೆಣ್ಣು ತವರು ಮನೆಯಲ್ಲಿದ್ದರೆ ಉತ್ತರಿಸಬೇಕಾಗುತ್ತದೆ ಎಂಬುದು ಇತ್ಯಾದಿ . ಹೀಗೆ ಆದಷ್ಟು ಹೊಂದಾಣಿಕೆ ಮಾಡಿಕೊಂಡು ಹೋಗು ಎಂದು ಹೇಳುವುದಿದೆ ಯಾರು ಸಹಕಾರ ಮಾಡುವುದಿಲ್ಲ ನನ್ನ ಭಾವನೆಗಳಿಗೆ ಬೆಲೆ ಇಲ್ಲ ಎಂಬುದು ಗೊತ್ತಾಗಿ  ಆದಷ್ಟು ಸಹಿಸಿಕೊಂಡು ಹೋಗಿ ಕೊನೆಗೆ ತನ್ನ ಜೀವವನ್ನೇ ಬಲಿ   ಕೊಡುತ್ತಾಳೆ ಇದು ನಮ್ಮ ಸಮಾಜದಲ್ಲಿ ನಡೆಯುವ ದೃಷ್ಟಾಂತ ಸಮಾಜಗಂಜಿ ಮಾನ-ಮರ್ಯಾದೆಗಂಜಿ ಜೀವಿಸಬೇಕಾಗಿದೆ. ಕೊನೆಗೂ ಬಲಿಯಾಗುವುದನ್ನು ಹೆಣ್ಣು ಹೊರತು ಬೇರೆ ಯಾರು ಅಲ್ಲ ಇಂತಹ ಪರಿಸ್ಥಿತಿ  ಬಂದಾಗ ತೀರ ಹದಗೆಟ್ಟ ಆಗ ಕಾಂಪ್ರಮೈಸ್ ಮಾಡಿ ಆದರೂ ಕಾಂಪ್ರಮೈಸ್ ಮಾಡಲು ಸಾದ್ಯವಿಲ್ಲ ಎಂದಾಗ ಅವಳಿಗೆ ಧೈರ್ಯ ತುಂಬಿ  ಜೀವನದಲ್ಲಿ ಹೋರಾಡಲು ಸಹಾಯಮಾಡಿ ಬದುಕುವುದನ್ನು ಕಲಿಸಿ  ಅದೇ ಹಿಂಸೆಗೆ ದೂಡಿ ಬಲಿಯಾಗಿ ಸಬೇಡಿ

ಆತ್ಮಹತ್ಯೆಗೆ ಹೀಗೆ ಅನೇಕ  ಕಾರಣಗಳಿರಬಹುದು ಇದಕ್ಕೆಲ್ಲಾ ಮೊದಲು ಬೇಕಾದ್ದು  ಇಚ್ಛಾಶಕ್ತಿ, ಆತ್ಮವಿಶ್ವಾಸ ಆತ್ಮಹತ್ಯೆಗೆ ಪ್ರಯತ್ನ ಪಟ್ಟು ಬದುಕುಳಿದು ಹೂರಬಂದವರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆದೇಯಾಗಿರುತ್ತದೆ. ಅವರನ್ನು ತುಚ್ಚವಾಗಿ  ಕಾಣಬೇಡಿ, ಹೀಯಾಳಿಸಬೇಡಿ. ಮೆಟ್ಟಿನಿಂತು ಬದುಕುವುದನ್ನು ಕಲಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವರು ಎಂದು  ಇನ್ನೂ  ಮನ ನೋಯಿಸಿ  ಅದೇ ದಾರಿ ಹಿಡಿದರೆ ಅದಕ್ಕೆ ನೀವು ಕಾರಣೀಭೂತರಾಗಬಹುದು. ಸದೃಢ ನಂಬಿಕೆ, ಇಚ್ಛಾಶಕ್ತಿ ,ಬದುಕಬಲ್ಲೆ ಎಂಬ ಹಠ ಹೋರಾಡಬಲ್ಲೆ, ಎಂಬ ಛಲ ಬದುಕಿನಲ್ಲಿ ಆಶಾಕಿರಣವನ್ನು  ಮೂಡಿಸುತ್ತದೆ. ಬದುಕಿನ ಕೊನೆ ಯಾವಾಗ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಅಂತಹ ಸಹವಾಸ ಮಾಡುವುದು ಮಾಡುವುದಾಗಿ ಮಾಡುವುದು ಕೂಡ ತಪ್ಪು  ಆತ್ಮಹತ್ಯೆಗೆ ಪ್ರಯತ್ನಿಸಿ ಹೊರ ಬಂದವರನ್ನು ಪ್ರೀತಿಯಿಂದ  ಕಾಣಬೇಕು ತುಚ್ಚವಾಗಿ  ಹೀಯಾಳಿಸಿ ಕಾಣಬೇಡಿ ಬದುಕಿಗೆ ಆಸರೆಯಾಗಿ ಅಂತ್ಯಕ್ಕೆ ಕಾರಣವಗಬೇಡಿ. ಯಾಕೆಂದರೆ  ನಮ್ಮ ಸುತ್ತಮುತ್ತ ನಮ್ಮ ಸಮಾಜದಲ್ಲಿ ನಾವು   ನೋಡುವ ಈ ದೃಷ್ಟಾಂತಗೆಳೇ ಕಾರಣ ಆಗಿರುತ್ತದೆ. ಈಗಿನ ಪೀಳಿಗೆ ಹೆಚ್ಚಾಗಿ ಬಲಿಯಾಗುತ್ತಾರೆ ಸೋಲು-ಗೆಲುವು ನೋವು-ನಲಿವು ಕಷ್ಟ ದುಃಖ ಸಾಮಾನ್ಯ  ಎಂಬುದನ್ನು ಮನಗಾಣಬೇಕು   .          

ಭಾರತ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ದತ್ತಾಂಶದ ಪ್ರಕಾರ ಆತ್ಮಹತ್ಯೆ ಪ್ರಕರಣದಲ್ಲಿ ಆರನೇ ಸ್ಥಾನದಲ್ಲಿ ಮಹಿಳೆಯರು 22ನೇ ಸ್ಥಾನದಲ್ಲಿ ಪುರುಷರ ಆತ್ಮಹತ್ಯೆ ಪ್ರಕರಣ ದಾಖಲಾಗುತ್ತದೆ .ಭಾರತಆತ್ಮಹತ್ಯೆ ಪ್ರಕರಣಗಳಲ್ಲಿ  ವಿಶ್ವದಲ್ಲಿ 21ನೇ ಸ್ಥಾನದಲ್ಲಿದೆ ನಾಲ್ಕು ನಿಮಿಷಗಳಿಗೊಮ್ಮೆ ಭಾರತದಲ್ಲಿ ಒಂದು ಆತ್ಮಹತ್ಯೆ ಪ್ರಕರಣ ನಡೆಯುತ್ತದೆ ಎಂಬ ವಿಶ್ಲೇಷಣೆಗಳಿವೆ ಹಾಗಾಗಿ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯ ಹಾಗೂ ನಮ್ಮೆಲ್ಲರ ಪಾತ್ರ ಮುಖ್ಯವಾಗಿರುತ್ತದೆ.